ಜಗತ್ತಿನಲ್ಲಿ ನಿಖರವಾಗಿ ಒಂದೇ ರೀತಿ ಕಾಣುವ ಅನೇಕ ವಿಷಯಗಳಿವೆ, ಆದರೆ
ಸ್ತನವು ಅವುಗಳಲ್ಲಿ ಒಂದಾಗಿಲ್ಲ. ನಿಮ್ಮ ಎರಡೂ ಕೈಗಳು, ಪಾದಗಳು, ಕಣ್ಣುಗಳ ಗಾತ್ರವು ಬಹುತೇಕ ಒಂದೇ
ಆಗಿರುತ್ತೆ, ಆದರೆ, ಸ್ತನದ ಗಾತ್ರ ಒಂದೇ ರೀತಿ ಇರೋದಿಲ್ಲ.
ಅಸಮ ಸ್ತನದ ಗಾತ್ರವು ತುಂಬಾ ಸಾಮಾನ್ಯವಾಗಿದೆ ಮತ್ತು ಸ್ತನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗಲೂ
ಗಾತ್ರ ಒಂದೇ ರೀತಿ ಇರೋದಿಲ್ಲ. ಆದರೆ ಇದು ಏಕೆ ಸಂಭವಿಸುತ್ತೆ? ಯಾವುದಾದರೂ ರೋಗದ ಸಂಕೇತವೇ? ತಿಳಿಯಿರಿ.
ವಿಭಿನ್ನ ಸ್ತನದ ಗಾತ್ರದ ಬಗ್ಗೆ ಕಾಳಜಿ ವಹಿಸಬೇಕೆ?
ಸ್ತನದಗಳ ಗಾತ್ರ ವಿಭಿನ್ನವಾಗಿದ್ದರೆ, ಅದಕ್ಕೆ ಹೆದರುವ ಅವಶ್ಯಕತೆ
ಇಲ್ಲ. ಅನೇಕ ಮಹಿಳೆಯರಿಗೆ ತಮ್ಮ ಸ್ತನದ ಅಭಿವೃದ್ಧಿ ಹೊಂದುತ್ತಿರುವಾಗ, ಹಾರ್ಮೋನುಗಳ ಬದಲಾವಣೆಯಿಂದಾಗಿ
ಒಂದು ದೊಡ್ಡದಾಗಿರಬಹುದು ಮತ್ತು ಒಂದು ಚಿಕ್ಕದಾಗಿರಬಹುದು.
ಸ್ತನದ ಗಾತ್ರದ ಜೊತೆಗೆ, ಅವುಗಳ ಆಕಾರವೂ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಎಡ ಸ್ತನ ದೊಡ್ಡದಾಗಿರುತ್ತದೆ ಮತ್ತು ಬಲ
ಸ್ತನ ಚಿಕ್ಕದಾಗಿರುತ್ತದೆ, ಆದರೆ ಇದಕ್ಕೆ ವಿರುದ್ಧವಾಗಿ ಇರುವ ಸಾಧ್ಯತೆ ಇದೆ.
ಸ್ತನದ ಗಾತ್ರ ಬದಲಾಗಲು ಕಾರಣಗಳು ಯಾವುವು?
ಪೂರ್ಣವಾಗಿ ಬೆಳೆದ ಸ್ತನವು ಗಾತ್ರವು ಸಹ ಬದಲಾಗಬಹುದಾದ ಅನೇಕ ಪರಿಸ್ಥಿತಿಗಳಿವೆ-
ಗರ್ಭಧಾರಣೆಯು ಸ್ತನ ಗಾತ್ರದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.
ಈ ಸಮಯದಲ್ಲಿ, ಸ್ತನ ದೊಡ್ಡದಾಗಬಹುದು ಅಥವಾ ಚಿಕ್ಕದಾಗಬಹುದು.
ಎದೆಯ ಹಾಲು ಕುಡಿಸುವ ಸಮಯದಲ್ಲಿ ಸ್ತನ ಗಾತ್ರದಲ್ಲಿ ತೀವ್ರ ಬದಲಾವಣೆ
ಉಂಟಾಗಬಹುದು. ಎದೆಯ ಹಾಲು ಕುಡಿಸಿದ ನಂತರವೂ ಸ್ತನದ ಗಾತ್ರ ಬದಲಾಗುತ್ತೆ.
ವೈದ್ಯರ ಬಳಿಗೆ ಯಾವಾಗ ಹೋಗಬೇಕು?
ವಿಭಿನ್ನ ಸ್ತನ ಗಾತ್ರಗಳನ್ನು ಹೊಂದಿರುವುದು ದೊಡ್ಡ ಸಮಸ್ಯೆಯಲ್ಲ,
ಆದರೆ ನಿಮ್ಮ ಸ್ತನದಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ, ಅದು ಕೆಲವು ಕಾಯಿಲೆ ಅಥವಾ ಹಾರ್ಮೋನುಗಳ ಸಮಸ್ಯೆಯಿಂದಾಗಿರಬಹುದು.
ಕೆಲವೊಮ್ಮೆ ಸಿಸ್ಟ್ ಕಾರಣದಿಂದ ಸ್ತನದ ಗಾತ್ರ ಬದಲಾಗುತ್ತೆ. ಈ ಸಂದರ್ಭದಲ್ಲಿ ನೋವು ಕಾಣಿಸಿಕೊಂಡರೆ
ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಇದು ಯಾವ ರೀತಿಯ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಸಂಭವಿಸುತ್ತದೆ?
ಎಟಿಪಿಕಲ್ ಡಕ್ಟ್ ಹೈಪರ್ಪ್ಲಾಸಿಯಾ ಸ್ತನ ಅಂಗಾಂಶ ಕೋಶಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ.
ಸ್ತನದೊಳಗಿನ ಹಾಲಿನ ನಾಳವು ಹೆಚ್ಚು ಬೆಳೆಯಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ.
ಸ್ತನದ ಒಳಗೆ ಒಂದು ರೀತಿಯ ಸಿಸ್ಟ್ ರಚನೆಯಾಗಬಹುದು. ಸ್ತನದ ನಾಳಗಳ ಬೆಳವಣಿಗೆಯೂ ಕುಗ್ಗಬಹುದು. ಇದನ್ನು ಹೈಪೋಪ್ಲಾಸಿಯಾ
ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಸಮಸ್ಯೆಗಳಿಂದಾಗಿ ಸ್ತನಗಳ ಗಾತ್ರವೂ ಬದಲಾಗುತ್ತದೆ.
ಯಾವುದೇ ರೀತಿಯ ಔಷಧವು ಸ್ತನದ ಮೇಲೆ ಪರಿಣಾಮ ಬೀರಬಹುದು.